
ಶ್ರೀ ಶ್ರೀಪಾದ ರಾಜರ ಕೃತಿ
ಯಾಕೆ ಇಂಥ ದುಡುಕು ಕೃಷ್ಣಯ್ಯ ನಿನಗೇಕೆ ಇಂಥ ದುಡುಕು ಕೃಷ್ಣಯ್ಯ |
ಪಾಕ ಶಾಸನ ವಂದ್ಯ ಪೋಕತನಗಳಿನ್ನು ಸಾಕು ಸಾಕಯ್ಯ ಕೃಷ್ಣ || ಯಾಕೆ ಇಂಥ ||
ಗೊಲ್ಲ ಬಾಲಕರ ನೀವೆಲ್ಲರು ಕೂಡಿಕೊಂಡು ಗುಲ್ಲುಮಾಡದೆ ಮೊಸರೆಲ್ಲ ಸವಿದೆಯಂತೆ ಕೃಷ್ಣ |
ಪೂತನಿ ಮೊಲೆಯನ್ನು ಭೀತಿ ಇಲ್ಲದೆ ಉಂಡು ಘಾತವ ಮಾಡಿದೆ ಮಾತನಾಡಯ್ಯ ಕೃಷ್ಣ ||ಯಾಕೆ ಇಂಥ||
ದುಷ್ಟ ಕಂಸನ ನೀನು ಕಷ್ಟವಿಲ್ಲದೆ ಮಡುಹಿ ಮುಷ್ಟಿಕನ ಕೊಂದೆ ದೃಷ್ಟಿ ತಾಕೀತಂದು | ನಿರ್ಜನ ಸ್ಥಳದಿ ಯಮಳಾರ್ಜುನರನ್ನು ಮಡುಹಿ ದುರ್ಜನರ ಕೊಂದೆ ಅರ್ಜುನ ಸಾರಥಿ || ಯಾಕೆ ಇಂಥ ||
ಅಂಗಿ ಟೊಪ್ಪಿಗೆ ಉಂಗುರ ಉಡಿದಾರ ಶೃಂಗರಿಸಿ ಕೊಂಡು ರಂಗ ವಿಠಲ ಬಾರೋ.. ಶೃಂಗರಿಸಿ ಕೊಂಡು ರಂಗ ವಿಠಲ ಬಾರೋ.. ಶೃಂಗರಿಸಿ ಕೊಂಡು ರಂಗ ವಿಠಲ ಬಾರೋ.. || ಯಾಕೆ ಇಂಥ ||
*********
Lyrics in English
Yaake intha duduku krishnayya ninageke entha duduku krishnayya | paaka shasana vandya pokatanagalinnu saku sakayya krishna || yaake entha ||
Golla balakara neevellaru koodikondu gullu madade mosarella savideyante krishna | pootani moleyannu bheeti ellade undu ghatava madide matanaadayya krishna || Yaake entha ||
Dushta kamsana neenu kashtavillade maduhi mushtikana konde drishti taakitandu | nirjana staladi yamalaarjunarannu maduhi durjanara konde arjuna sarathi || yaake entha ||
Angi toppige ungura udidaara shrungarisikondu ranga vittala baaro ….. shrungarisikondu ranga vittala baaro …. shrungarisikondu ranga vittala baaro …. || Yaake entha ||