ಯಾರು ಒಲಿದರೇನು ನಮಗಿನ್ನಾರು / Yaaru olidarenu namaginnaru

ರಚನೆ : ಶ್ರೀ ಪುರಂದರ ದಾಸರು

ಯಾರು ಒಲಿದರೇನು ನಮಗಿನ್ನಾರು ಮುನಿದರೇನು ||
ಕ್ಷೀರಸಾಗರಶಾಯಿಯಾದವನ ಸೇರಿದಂಥ ಹರಿದಾಸರಿಗೆ ||ಯಾರು||

ಊರನಾಳುವ ದೊರೆಗಳು ನಮ್ಮನು ದೂರ ಅಟ್ಟಿದರೇನು
ಘೋರಾರಣ್ಯದಿ ತಿರುಗುವ ಮೃಘಗಳು ಅಡ್ಡಗಟ್ಟಿದರೇನು |
ಮಾರಿ ಹಿಂಡು ಮತ್ತೆ ಮುಸುಕಿನ ದಂಡು ಮೈಗೆ ಮುತ್ತಿದರೇನು ।
ವಾರಿಜನಾಭನ ವಸುದೇವ ಸುತನ ಸಾರುವಂಥ ಹರಿದಾಸರಿಗೆ ||ಯಾರು||

ಪಡೆದ ತಾಯಿತಂದೆ ನಮ್ಮೊಳು ಅಹಿತ ಮಾಡಿದರೇನು
ಮಡದಿ ಮಕ್ಕಳು ಮನೆಯ ನೆಂಟರು ಮುನಿಸುಗುಟ್ಟಿದರೇನು ।
ಒಡನಾಡುವ ಗೆಳೆಯರು ನಮ್ಮೊಳಗೆ ವೈರವ ಬೆಳೆಸಿದರೇನು |
ಕಡಲಶಯನ ಕರುಣಾನಿಧಿ ನಾಮವು ಒಡಲೊಳಗಿಹ ಹರಿದಾಸರಿಗೆ ||ಯಾರು||


ಕಾನನದೊಳು ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನು
ಜೇನಿನಂದದಿ ಕ್ರಿಮಿ ಕೀಟಗಳು । ಚರ್ಮಕೆ ಮುತ್ತಿದರೇನು |
ಭಾನುನಂದನ ಬುಧ ಮಂಗಳರಾ ಬಲವು ತಪ್ಪಿದರೇನು |
ದೀನನಾಥ ಶ್ರೀ ಪುರಂದರವಿಠಲನ ಧ್ಯಾನವುಳ್ಳ ಹರಿದಾಸರಿಗೆ ||ಯಾರು||

Lyrics in English

Yaaru olidarenu namaginnaru munidarenu |
ksheerasagarashayiyadavana seridanta haridassarige || yaru ||


Ooranaluva doregalu nammanu doora attidarenu |
ghoraranyadi tiruguva mrughagalu addagattidarenu |
mari hindu matte musukina dandu maige muttidarenu |
vaarijanabhana vasudevasutana saruvantha haridasarige || yaru ||


Padeda tayitande nammolu ahita madidarenu |
madadi makkalu maneya nentaru munisuguttidarenu |
odanaduva geleyaru nammolage vairava belesidarenu |
kadalashayana karunanidhi namavu odalolagiha haridasarige ||yaru||


Kananadolu haridaduva sarpavu kalige suttidarenu |
jeninandadi krimi keetagalu charmakke muttidarenu |
bhanunandana budha mangalara balavu tappidarenu |
deenanatha sri purandaravittalana dhyanavulla haridasarige ||yaru ||


Leave a Reply