ರಾಮನ ನೋಡಿರೈ ನಿಮ್ಮಯ ಕಾಮಿತ / Ramana nodirai nimmaya kamita

ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ ||ಪ ||

ತಾಮರಸಸಖ ಸುವಂಶಾಬ್ಧಿಶರ
ತ್ಸೋಮಾ ಕಮಲಧೀಮ || ಅ ಪ ||

ಧಾತನನುಜ್ಞದಿ ದೇವತ್ವಷ್ಟ್ರ ನಿರ್ಮಿಸಿದಾ ಅಜ ಪೂಜಿಸಿದಾ
ಜ್ಯೋತಿರ್ಮಯ ಜಾಬಾಲಿ ಮುನಿಯ
ತಪವರಿದಾ ಕಾಮಿತ ನೆರೆದಾ
ಭೂತಾಧಿಪನ ಭವನದೊಳರ್ಚನೆಗೊಂಡಾ ದೃತಕೋದಂಡಾ
ಮಾತಂಗಾರಿ ವರೂಥಿಯ ಜನಕ
ಮೇದಾಗಾರಕೆ ಪೋದಾ || 1 ||

ಸೌಭರಿ ಮುನಿಪಗೆ ಸೌಖ್ಯವ ಕರುಣಿಸಿ ಕೊಟ್ಟ ಜಗಕತಿಧಿಟ್ಟ
ನಾಭಿಜನ್ಮನಿಹ ನಗವರ ಸ್ಥಾನಕೆ ಬಂದ ಶುಭಗುಣ ವೃಂದಾ
ವೈಭವದಿಂದಲಯೋಧ್ಯಾ ನಗರದಿ ಮೆರೆದಾ ಕಾಮಿತವೆರೆದಾ
ಸ್ವಾಭಿಮಾನದಲಿ ಸತಿಯಳಿಗಿತ್ತನು ವರವಾ ದೇವರ ದೇವಾ || 2 ||

ಜಾಂಬವಂತನಿಗೆ ಜಾನಕಿರಮಣನು ಇತ್ತ ತನ್ನಯಧ್ಯಾತ
ಸಂಭ್ರಮದಲಿ ವೇದಗರ್ಭನೊಡನಾಡ್ದಾ ಮುಕ್ತಿಯ ನೀಡ್ದಾ
ಕುಂಭೀಶ್ವರನ ಸುಕೋಶದಿ ಬಹುದಿನ ವಾಸ ವೆಸಗಿದನೀಶಾ
ನಂಬಿ ತುತಿಸಿದ ನರಹರಿ ಮುನಿಪಗೆ
ಒಲಿದಾ ಮೋದದಿ ನಲಿದ|| 3 ||

ಅಲವಬೋಧಮುನಿ ಅತಿಮೋದದಲರ್ಚಿಸಿದ ಸಲೆ ಮೆಚ್ಚಿಸಿದ
ಇಳೆಯೊಳಗೆ ಬಹು ಯತಿಕರ ಪೂಜಿತನಾದ ಲೀಲ ವಿನೋದ
ಬಲುನಂಬಿದ ಭಕುತರ ಕಲಿಮಲಗಳ
ಕಳೆದ ಮನದೊಳು ಪೊಳೆದ
ಸುಲಲಿತ ಗುಣನಿಧಿ ವಸುಧೇಂದ್ರಾರ್ಯರ
ಪ್ರೀಯ ಕವಿಜನಗೇಯ || 4 ||

ವಾರಿಧಿಬಂಧನ ವಾನರ ನಾಯಕರಾಳ ದೈತ್ಯರ ಸೀಳ್ದಾ
ನಾರದ ಮುಖ ಮುನಿನಮಿತ
ಪದಾಂಬುಜನೀತಾ ತ್ರಿಗುಣಾತೀತ
ಆರಾಧಿಪರಿಗೆ ಅಖಿಳಾರ್ಥಗಳನು ಕೊಡುವಾ ದುರಿತವ ತಡೆವ
ನೀರಜಾಕ್ಷ ಜಗನ್ನಾಥ ವಿಠ್ಠಲ ನಿಶ್ಚಿಂತಾ ಸೀತಾಕಾಂತ|| 5 ||

Lyrics in English

Ramana nodirai nim’maya kamita bedirai || PA ||

Tamarasasakha suvansabdhisara tsoma kamaladhima || A PA ||

Dhatananujnadi devatvastra nirmisida aja pujisida
jyotirmaya jabali muniya tapavarida kamita nereda
bhutadhipana bhavanadolarcanegonda drtakodanda
matangari varuthiya janaka medagarake poda || 1 ||

Saubhari munipage saukhyava karunisi kotta jagakatidhitta
nabhijanmaniha nagavara sthanake banda subhaguna vrnda
vaibhavadindalayodhya nagaradi mereda kamitavereda
svabhimanadali satiyaligittanu varava devara deva || 2 ||

Jambavantanige janakiramananu itta tannayadhyata
sambhramadali vedagarbhanodanadda muktiya nidda
kumbhisvarana sukosadi bahudina vasa vesagidanisa
nambi tutisida narahari munipage olida modadi nalida|| 3 ||

alavabodhamuni atimodadalarchisida sale mecchisida ileyolage
bahu yatikara pujitanada lila vinoda balunambida bhakutara
kalimalagala kaleda manadolu poleda sulalita
gunanidhi vasudhendraryara priya kavijanageya || 4 ||

varidhibandhana vanara nayakarala daityara silda narada
mukha muninamita padambujanita trigunatita aradhiparige
akhilarthagalanu koduva duritava tadeva nirajaksa
jagannatha viththala nischinta sitakanta|| 5 ||

Leave a Reply