
ವಂದಿಪೆ ನಾ ನಿನ್ನನೂ ಸೊಂಡಿಲ ಗಣಪ
ಬಂದೆನ್ನ ಸಲಹೋ ನೀನೂ ||ವಂದಿಪೆ||
ಪುಂಡರಿಕಾಕ್ಷನುಧ್ಧಂಡ ಪರಾಕ್ರಮ
ಕೊಂಡಾಡಿಸುವಿ ವಕ್ರತುಂಡನೆಂಬರೊ ನಿನ್ನ ||ವಂದಿಪೆ ||
ಪಾಶಾಂಕುಶಧರನೆ ಮೋದಕ ಹಸ್ತ
ಭಾಷಿಗ ನೀನಹುದೋ
ಆಶಪಾಶಗಳಿಂದ ಘಾಶಿಗೊಂಡಿಹ ಮನ
ಬೇಸರ ಕಳೆದೆನ್ನ ಪೋಷಿಪನನು ತೋರೊ ||ವಂದಿಪೆ ||
ಗೌರಿಯ ವರಪುತ್ರನೆ
ಪ್ರಾರ್ಥಿಸುವೆ ನಿನ್ನನು
ಗೌರಿಯ ಪಾದ ಸ್ಮರಣೆ
ಗೌರವದಿಂಮಾಳ್ಪ ಶೌರ್ಯ ಎನಗೆ ಕೊಟ್ಟು
ಮಾರಪಿತನ ಪಾದ ತೋರಿಸು ತವಕದಿ ||ವಂದಿಪೆ||
ಅಂತರಂಗದ ಶತ್ರುಗಳಿಂದಲಿ ಮನ
ಚಿಂತೆಗೆ ಗುರಿ ಗೈಸಿತೋ
ಎಂತುಭವದಾಂಟುವಂತ ಪಥವ ಕಾಣೆ
ಶಂಕುತೀರ್ಥನ ಪಾದ ಚಿಂತನೆ ಕೊಡಿಸಯ್ಯ || ವಂದಿಪೆ||
ವಾನರನಿಖರದೊಳು ಶ್ರೇಷ್ಠನ ಪ್ರಭು
ವಾರಿಧಿಯನು ಬಂಧಿಸೇ
ಆದಿಮೂರುತಿ ನಿನ್ನ ಆರಾದಿಸಿದನೆಂಬ
ಸೋಜಿಗ ಸುಧ್ಧಿ ಮೂರ್ಜಗದೊಳಗುಂಟು ||ವಂದಿಪೆ ||
ಕಮಲನಾಭವಿಠ್ಠಲ ಭಕ್ತರ ಹ್ರದಯ
ಕಮಲನಾಭವಿಠ್ಠಲಾ… ವಿಠ್ಠಲಾ…
ವಿಠ್ಠಲಾ…ವಿಠ್ಠಲಾ…
ಕಮಲನಾಭವಿಠ್ಠಲ ಭಕ್ತರ ಹ್ರದಯ
ಕಮಲದೊಳಗೆ ಶೋಭಿಪಾ
ಮಿನುಗುವ ಮಧ್ವ ಮಂಟಪದೊಳು ರಾಜಿಪ
ಸನಕಾದಿವಂದ್ಯನ ಕ್ಷಣ ಬಿಡದೆ ತೋರೋ
||ವಂದಿಪೆ||
Lyrics in English
Vandipe naa Ninnanu sondila ganapa
bandanna salaho neenu |
pundarikakshanuddanda parakrama
kondadisuvi vakratundanembaro Ninna || Vandipe ||
Pashankushadharane modaka hasta
bhashika neenahudo
ashapashagalinda ghashigondiha mana
Besarade kaledenna poshipananu toro || Vandipe ||
Gowriya varaputrane
prarthisuve ninnanu
gowriya pada smarane
gouravadimmalpa shourya enage kottu
marapitana pada torise tavakadi || Vandipe ||
Antaraṅgadi shatrugalindali mana
chintege guri gaisito
entubhavadantuvanta oathava kane
shankuteerthana
pada chintane kodisayya || Vandipe ||
Vanaranikharadolu shreshtana prabhu
varidhiyanu bandhise
adimuruti Ninna aradhisidanemba
sojiga suddhi murjagadolaguntu || Vandipe ||
Kamalanabha vittala …. vittala …
vittala …… vittala
kamalanabha vittala bhaktara hrudaya
kamaladolage shibhipa
minuguva madhwa mantapadolu ragipa
sanakadivrundana kshana bidade toro || Vandipe ||