
ವಾಣಿ ಪರಮ ಕಲ್ಯಾಣಿ ನಮೋ ನಮೋ ।
ಅಜನ ರಾಣಿ ಪಂಕಜಪಾಣಿ ।। ವಾಣಿ ।।
ಫಳಿರೆ ಫಳಿರೆಯೆಂಬೆ ಭಕ್ತಜನ ಸುಖದಾಂಬೆ
ಸುಳಿದಾಡು ಶುಭಾನಿತಂಬೆ ಅಂಬೇ ….. ।
ಹೊಳೆ ಹೊಳೆವ ಮುಖ ಮುಕುರಬಿಂಬೆ
ಇಳೆಯೊಳಗೆ ಸರಿಗಾಣೆ ಶಾರದಾಂಬೆ ಪುತ್ಥಳಿಗೊಂಬೆ ।।ವಾಣಿ ।।
ಶರಣು ಶರಣಲೇ ದೇವಿ ಸ್ಮರಣೆಮಾತ್ರದಿ ಕಾಯ್ವೆ
ಚರಣದಂದುಗೆ ಕೀವಿ ಮೆರೆವೆ ವಾಗ್ದೇವಿ ।
ನಲಿನಲಿವಾಭರಣಗಳ ಧರಿಸಿ ನಟಿಸುವಿ ದೇವಿ
ಇಳೆಯೊಳಗೆ ಹರಿಣಾಕ್ಷಿ ಸಲಹು ಕಾಮಾಕ್ಷಿ ।।ವಾಣಿ ।।
ಜಯ ಜಯತು ಜಗನ್ಮಾತೆ ಜಗದೊಳಗೆ ಪ್ರಖ್ಯಾತೆ
ದಯಮಾಡುದವಳಗೀತೆ ಮಾತೇ ….. ।
ನಿನ್ನಿಂದ ವಿದ್ಯೆ ಬುದ್ಧಿ ಅರಿಯೊಲುವೇ ಅಮ್ಮ
ನಿನ್ನ ನಂಬಿದೆ ತಾಯೇ ನೀ ಬಂದು ಕಾಯೇ ।
ಸತತ ಶ್ರೀ ಹಯವದನ ಪದ ಸೇವಕ ಪ್ರೀತೆ
ಕ್ಷಿತಿಯೊಳಗೆ ಲಯದಿಂದ ತೆಳಿಸೆನ್ನ ವಿಧಿಜಾತೆ ।।ವಾಣಿ ।।
Lyrics in English
Vaani parama kalyaani namo namo | ajana raani pankajapaani ||vaani||
Ghalire ghaliremba bhaktajana sukhadaambe sulidaadu shubhaanitambe ambe …..| hole holeva mukha mukarabimbe eleyolage sarigaane shaaradaambe puthaligombe || vaani ||
Sharanu sharanale devi smarane maatradi kaayve charanadanduge keevi mereve vaagdevi | nali nalivaabharanagala dharisi natisuva devi eleyolage harinaakshi salahu kaamakshi || vaani ||
Jaya jayatu jaganmaate jagadolage prakhyaate dayamaadudavala geete maate … | ninninda vidye buddhi ariyoluve amma ninna nambide taaye nee bandu kaaye | satata sri hayavadana pada sevaka preete kshitiyolage layadinda telisenna vidhijaate || vaani ||