ಶರಣು ಶರಣಯ್ಯ ಶರಣು ಬೆನಕ/Sharanu sharanayya

ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಲಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನವಿನಾಶಕ ಪಾದ ನಮಸ್ತೇ ನಮಸ್ತೇ ನಮಃ ||

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ |
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೋ ನಮ್ಮ ಕರಿಮುಖ ||

ಎಲ್ಲರೂ ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆಂದ |
ಗರಿಕೆ ತಂದರೆ ನೀನು ಕೊಡುವೆ ವರವನ್ನ
ಗತಿ ನೀನೇ ಗಣಪನೆ ಕೈ ಹಿಡಿಯೋ ಮುನ್ನ ||

ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓಡುವುದು ಭೀತಿ |
ನೀಡಯ್ಯ ಬಾಳೆಲ್ಲ ಬೆಳಗುವ ಶಕುತಿ |
ತೋರಯ್ಯ ನಮ್ಮಲ್ಲಿ ನಿನ್ನಯಾ ಪ್ರೀತಿ ||

ಬೆನಕ ಬೆನಕ ಏಕದಂತ ಪಚ್ಚೆಕಲ್ಲು
ಪಾಣಿಮೆಟ್ಳು ಒಪ್ಪುವಂತ ವಿಘ್ನೇಶ್ವರಾ ನಿನಗೆ
ಇಪ್ಪತ್ತೊಂದು ನಮಸ್ಕಾರಗಳು

Lyrics in English

Sharanu Sharanayya sharanu benaka
needayya baalella belaguvaa belaka
ninna nambida janake ihudayya yella sukha
tande kaayo namma karimukha ||

Ellaaru ondaagi ninna
namisi naliyodu nodoke chenna
garike tandare neenu
koduve varavanna
gati neene Ganapane kai hidiyo munna ||1||

Sooryanedurali manju karaguva reeti
ninna neneyalu odane Oduvudu bheeti
needayya baalella belaguva shakuti
torayya nammalli ninnaya preeti ||2||

Benaka benaka ekadanta
pachegallu panimetalu oppuva Vigneshwara
ninage ippatmoru namaskaragalu ||3||

Click here to listen song by P.B.Srinivas

Leave a Reply