
ಶ್ರಾವಣ ಮಂಗಳ ಮುಂಜಾನೆ ಮಂಗಳಗೌರಿಯು ಬಂದಾಳೆ | ಮಂಗಳ ದ್ರವ್ಯವ ತನ್ನಿರೇ |ಮಾತಾಯಿ ಕಾಪಾಡು ಎನ್ನೀರೆ ||
ರಂಗೋಲಿ ಚಿತ್ತಾರ ಹಾಕೀರೆ | ಮಾವೆಲೆ ತೋರಣ ಕಟ್ಟೀರೆ |ಮಂಟಪ ಶೃಂಗಾರ ಮಾಡೀರೆ | ಬಂಗಾರ ಪ್ರತಿಮೆಯ ತುಂಬಿಸಿರೆ ||
ಗಂಧಾದಿ ಪುಷ್ಪದಿ ಪೂಜಿಸಿರೆ | ಅರಶಿನ ಕುಂಕುಮ ಅರ್ಚಿಸಿರೆ |ಹದಿನಾರು ದೀಪಗಳ ಬೆಳಗೀರೆ | ಅಲಂಕಾರ ತಾಯಿಗೆ ಮಾಡೀರೆ ||
ಕರ್ಪೂರದಾರತಿ ಎತ್ತೀರೆ | ನೈವೇದ್ಯ ಬಗೆಬಗೆ ತನ್ನಿರೆ| ಆ ಗೌರಿ ಕೀರ್ತಿಯ ಹಾಡೀರೆ | ಶಿರಭಾಗಿ ಭಕ್ತಿಯಿಂದ ಹಾಡೀರೆ ||
ಮಂಗಳ ಗೌರಿಯ ಪೂಜಿಸಲು | ಮಂಗಳ ಭಾಗ್ಯವು ದೊರಕುವುದು | ಮನಸ್ಸಿಗೆ ನಿರ್ಮಲ ಶಾಂತಿಯು ಲಭಿಸಿ | ಮನೆಯದು ನಂದನವಾಗುವುದು ||
Lyrics in English
Shravana mangala munjaane manga lagowriyu bandaale | mangala dravyava tanneere | maataayi kapaadu ennere||
rangoli chittaara hakire |maavele torana kattire |mantapa shrungara maadire | bangara pratimeya tumbisire ||
Gandhadi pushpadi poojisire | arasina kumkuma archisire | hadinaru deepagala belagire | alankara taayige maadire||
Karpooradaarati ettire | naivedhya bagebage tannire | a gowri keertiya hadire | shirabhagi bhaktiyind hadire ||
Mangala gowriya poojisalu | mangala bhagyavu dorakuvudu | manasige nirmala shantiyu labhisi | maneyadu nandanavaguvudu ||