ಶ್ರೀದೇವಿ ವಾಗ್ದೇವಿ ಜಯಗೌರಿ / Sridevi vagdevi jayagowri

ಶ್ರೀದೇವಿ ವಾಗ್ದೇವಿ ಜಯಗೌರಿ । [ಪ]
ಸರಿಸಾಟಿ ನಿನಗಿಲ್ಲ ದೈವಗಳದೈವ ಶ್ರೀದೇವಿ ….।। [ಅ. ಪ]

ಪಾಲ್ಗಡಲ ಶ್ರೀನಿಧಿಯೇ ಹೃತ್ಕಮಲ ವಾಸಿ
ಫಲಬಗೆಯ ಸಿರಿತನಕ್ಕೆ ಸಿರಿಯೇ ನೀನಮ್ಮ ।
ಕುಲದೇವಿ ನೀನೆಂದು …..ಅ…… ಅ…. ಬೇಡುವೆ ನಿನ್ನ
ಕುಲಕ್ಕಾಗಿ ಐಸಿರಿಯ ವರನೀಡು ತಾಯಿ ।। [ಶ್ರೀದೇವಿ]

ಶೃತಿಯಾಗಿ ವೀಣೆಯಲಿ ಗತಿಯಾಗಿ ಬಾಳಲ್ಲಿ
ಸತಿಯಾಗಿ ಪೊರೆಯುತಿಹ ಬ್ರಹ್ಮನರಸಿ ।
ಹಿತವಾದ ನುಡಿ ಕಲಿಸಿ ಮತಿವಂತಳಾಗಿಸುತ
ಪತಿ ಸೇವೆ ಕರುಣಿಸು ಉಸಿರಿರುವತನಕ ।। [ಶ್ರೀದೇವಿ ]

ಪರಶಿವನ ಅರ್ಧಾಂಗಿ ಪತಿತ ಪಾವನೆ ಗೌರಿ
ಅರಿತವರ ಬಾಳಿನಲಿ ನೀನೆ ಪಾವನ ಗಂಗೆ ।
ಕರಗುವುದು ನೀನೊಲಿಯೇ ದುರಿತಗಳೆಲ್ಲಾ
ಪರಿಹರಿಸಿ ದುಗುಡವನು ಮುತೈದೆತನ ನೀಡು।। [ಶ್ರೀದೇವಿ]

Lyrics in English

Sridevi vagdevi jaya gowri ||pa||
sarisaati ninagilla daivagala daiva sridevi ….||a.pa||

Paalgadala srinidhiye hrutkamalavaasi |phalabageya siritanakke siriye neenamma |
kuladevi neenendu ….a…a….beduve ninna, kulakkaagi isiriya varaneedu taayi ||sridevi||

Shrtiyaagi veeneyali gatiyaagi baalalli satiyaagi poreyutiha brahmanarasi|hitavaada nudi
kalasi mativantalaagisuta pati seve karunisu usiriruvatanaka ||sridevi||

Parashivana ardhaangi patita paavane gowri |aritavara baalinali neene paavana gange |
karaguvudu neenoliye duritagalella | pariharisi dugudavanu muttaidetana needu ||sridevi||


Leave a Reply