ಸಾಟಿಯುಂಟೆ ಶ್ರೀನಿವಾಸನ ದಾಸಕೂಟದ / Saatiyunte srinivasana dasakootada

ಸಾಟಿಯುಂಟೆ ಶ್ರೀನಿವಾಸನ ದಾಸಕೂಟದ ಮ್ಯಾಳಕೆ
ಬೂಟಕದ ಮಾತಲ್ಲ ಕೇಳಿರಿ ಭಜನೆ ಮಾಡುತ ತಾಳಕೆ || ಪ||

ವಾಸುದೇವನ ವರ್ಣಿಸಲು ಕಮಲಾಸನಾದಿ ಸುರೇಂದ್ರರು
ದಾಸಜನರ ಸಮೂಹದೊಳಗಾವಾಸವಾಡುತ ನಲಿವರು
ಸೂಸುತಿಹ ಗಂಗಾದಿನದಿಗಳು ಬ್ಯಾಸರದೆ ಬಂದಿರುವವು
ಕೇಶವನ ಕೊಂಡಾಟ ಧರೆಯೊಳು ಮೀಸಲಳಿಯದೆ ಮಧುರವು ||1||

ಬಾರಿಸುತ ತಂಬೂರಿ ತಾಳವ ನಾರದರ ಸಂಸ್ಮರಿಸುತ
ಭೂರಿ ಕಿಂಕಿಣಿ ಮದ್ದಳೆಯ ಶೃಂಗಾರ ರಸವನು ಸುರಿಸುತಾ
ವಾರಿಜಾಕ್ಷನ ಪರಮಮಂಗಳ ಮೂರುತಿಯ ಮುಂದಿರಿಸುತ
ಮಾರುತನ ಮತವರಿತು ಬಹುಗಂಭೀರ ಸ್ವರದಿಂದರುಹುತಾ ||2||

ಹಿಂದೆ ಗಳಿಸಿದ ಹಲವು ದುರಿತವು ಕುಂದುವುದು ನಿಮಿಷಾರ್ಧದಿ
ಅಂದಿನಂದಿನ ದೋಷದುಷ್ಕøತವೊಂದು ನಿಲ್ಲದು ಕಡೆಯಲಿ
ಇಂದಿರಾಧವ ಶೇಷ ಭೂಧರ ಮಂದಿರನು ಮಹ ಹರುಷದಿ
ಮುಂದೆ ನಲಿವುತ ಮನಕೆ ಪೂರ್ಣಾನಂದವೀವನು ನಗುತಲಿ ||3||

Lyrics in English

Saatiyunte srinivasana dasakootada myalake | bootakada maatalla keliri bhajane mduta taalake ||pa||

Vasudevana varnisalu kmalaasanadi surendraru | dasa janara samoohadolagaavasavaaduta nalivaru | soosutiha gangadi nadigalu byasarade bandiruvavu | keshavana kondata dhareyolu meesalaliyade madhuravu ||1||

Barisuta tamboori talava naradara samsmarisuta | bhoori kinkini maddaleya shrungara rasavanu surisutaa | varijakshana parama mangala moorutiya mundirisuta | marutana matavaritu bahu gambhira swaradindaruhutaa ||2||

Hinde galisida halavu duritavu kunduvudu nimishaardadi | andinandina doshadushkantavindu nilladu kadeyali | indiradhava shesha bhudhara mandiranu maha harushadi | munde nalivuta manake purnanandaveevanu nagutali ||3||

*************

Leave a Reply