
ಸಿಂಹರೂಪನಾದ ಶ್ರೀಹರಿ ಶ್ರೀ ನಾಮ ಗಿರೀಶನು ||ಪ||
ಒಮ್ಮನದಿಂದಲಿ ನಿಮ್ಮನು ಭಜಿಸಲು ಸಮ್ಮತದಿಂದಲಿ ಕಾಯ್ವೆನೆಂಬ ಹರಿ ||ಅಪ||
ತರಳನು ಕರೆಯೆ ಸ್ತಂಭವ ಬಿರಿಯೇ | ತುಂಬ ಉಗ್ರವನು ತೋರಿದನು || ಬಗೆದನು ಕರುಳನು ಕೊರಳೊಳಗಿಟ್ಟನು | ತರಳನ ಸಲಹಿದ ಶ್ರೀ ನರಸಿಂಹ ||೧||
ಭಕ್ತರೆಲ್ಲ ಕೂಡಿ ಬಹುದೂರ ಓಡಿ ಪರಮ ಶಾಂತವನು ಬೇಡಿದರು ಕರೆದರು ಸಿರಿಯನು ತೊಡೆಯೊಳಗಿರಿಸಿದ | ಪರಮ ಹರುಷವನು ಪೊಂದಿದ ಶ್ರೀ ಹರಿ ||೨||
ಜಯ ಜಯ ಜಯ ಎಂದು ಹೂವನು ತಂದು ಹರಿ ಹರಿ ಹರಿ ಎಂದು ಸುರರೆಲ್ಲ ಸುರಿಯೆ ಭಯ ನಿವಾರಣ ಭಾಗ್ಯ ಸ್ವರೂಪನೆ ಪರಮ ಪುರುಷ ಶ್ರೀ ಪುರಂದರ ವಿಠಲ ||೩||
Lyrics in English
Simharupanada srihari sri nama girishanu ||pa||
Ommanadindali nimmanu bajisalu sammatadindali kayvenemba hari ||apa||
Taralanu kareye stambava biriye |tumba ugravanu toridanu ||bagedanu karulanu koralolagittanu |taralana salahida Sri narasimha ||1||
Baktarella kudi bahudura odi parama santavanu bedidarukaredaru siriyanu todeyolagirisida |parama harushavanu pondida sri hari ||2||
Jaya jaya jaya endu huvanu tanduhari hari hari endu surarella suriyebaya nivarana bhagya svarupane parama purusha srI purandara vithala ||3||