ಹನುಮನ ಮನೆಯವರು ನಾವೆಲ್ಲರೂ/ Hanumana maneyavaru naavellaru

ಹನುಮನ ಮನೆಯವರು ನಾವೆಲ್ಲರೂ।
ಹನುಮನ ಮನೆಯವರು  ।।                                       ।। ಪ ।।

ಅನುಮಾನ ಪಡೆದೆಲೆ  ಸ್ಥಳವ ಕೊಡಿರಿ  ಎಮಗೆ ।।          ।। ಅ . ಪ ।।

ಊರ್ಧ್ವಪುಂಡ್ರವ  ನೋಡಿ  ಶ್ರದ್ಧೆ ಭಕುತಿ ನೋಡಿ ।
ಹೃದ್ಗಕ್ತವಾದೆಮ್ಮ  ತತ್ತ್ವಗಳನೆ  ನೋಡಿ।।
ಇದ್ದುದನಿಲ್ಲೆಂಬ  ಅಬದ್ಧ ನುಡಿವರಲ್ಲಾ ।
ಮಧ್ವಮುನಿಯು ನಮ್ಮ ತಿದ್ದಿರುವುದ ನೋಡಿ ।।              ।।೧।।

ಸತ್ಯ ಮಿಥ್ಯಗಳಿಗೆ  ಅಂತರ ಬಲ್ಲೆವು ।
ಉತ್ತಮ ನೀಚರೆಂಬುವ  ಭೇದ ಬಲ್ಲೆವು ।।
ಸುತ್ತಲು ಕಂಡು ಕಾಣದ ಇಹ ಎಲ್ಲಕ್ಕೂ ।
ಉತ್ತಮನೊಬ್ಬನೇ  ಹರಿಯೆಂದು ಬಲ್ಲೆವು ।।          ।।೨।।

ಹಲವು ಲೋಕಗಳುಂಟೆಂಬುದ  ಬಲ್ಲೆವು ।
ಹಲವು ಯೋನಿಗಳಲ್ಲಿ ಜನ್ಮಗಳೊಲ್ಲವು ।।
ಅಳವ ಭೋಧರು  ನಮ್ಮ ಕಳುಹಿದರಿಲ್ಲಿಗೆ ।
ತಿಳಿಸಿ ಪ್ರಸನ್ನ ಶ್ರೀ ಹರಿಗೆ ವಿಚಾರವ ।।      


Lyrics in English   

Hanumana maneyavaru naavellaru | hanumana maneyavaru ||pa||

anumaana padadele stalava kodiri emage ||a.pa.||

Urdhrapundrava nodi shradde bhakuti nodi | hradgaktavaademma tatvagalane nodi | eddudanillemba abbaddha nudivaralla | madhwa muniyu namma tiddiruvuda nodi ||1||

satya mithyegalige antara ballevu | uttama neecharembuva bheda balevu | suttalu kandu kaanada eha ellakku | uttamanobbane hriyendu ballevu ||2|

Halavu lokagaluntembuda ballevu | halavu yonigalalli janmagalollavu | alava bhodharu namma kaluhidarillige | tilisi prasanna sri hari vichaarava ||3||


Leave a Reply