ಹರಿ ನಾರಾಯಣ ಹರಿ ನಾರಾಯಣ /Hari naaraayana hari

ಹರಿ ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಏನು ಮನವೇ ||

ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ ||

ತರಲ ಧ್ರುವನಿಂದ ಅಂಕುರಿಸಿತು ಅದು ವರ ಪ್ರಹ್ಲಾದನಿಂದ ಮೊಳಕೆ ಆಯಿತು |
ಧರಣೀಶ ರುಕ್ಮಾಂಗದನಿಂದ ಚಿಗುರಿತು ಗುರು ಪಿತಾಮಹನಿಂದ ಹೂವಾಯ್ತು ||

ವಿಜಯನ ಸ್ತುತಿಯಿಂದ ಫಲವಾಯಿತು ಅದು ಗಜರಾಜನಿಂದ ದೊರೆ ಹಣ್ಣಾಯ್ತು |
ದೃಢ ಶುಕಮುನಿಯಿಂದ ಪರಿಪಕ್ವವಾಯಿತು ಅಜಮಿಳ ತಾನುಂಡು ರಸವ ಸವಿದ ||

ಕಾಮಿತ ಫಲವೀವ ನಾಮವೊಂದಿರಲಿಕ್ಕೆ ಹೋಮ ನೇಮ ಜಪ ತಪವೇಕೆ |
ಸ್ವಾಮಿ ಶ್ರೀಪುರಂದರವಿಠಲನ ನಾಮವ ನೇಮದಿಂದ ನೀ ನೆನೆ ಮನವೇ ||

Lyrics in English

Hari naaraayana hari naaraayana |
Harinaaraayana ene manave ||

Naaraayananemba naamada beejava |
Naarada bittida dhareyolage ||

Tarala druvaninda ankurisitu adu |
Vara pralhaadaninda molakaaytu |
Dharaneesha rukumaangadaninda chiguritu |
Kuru pitaamahaninda hoovaaytu || 1 ||

Vijayana stutiyinda kaayaayitu adu |
Gajaraajaninda dore hannaaytu |
Dhrudha shukamuniyinda paripakvavaayitu |
Ajaamila taanundu rasava savidaa || 2 ||

Kaamita phalaveeva naamavondiralikke |
Homa nema japa tapaveke |
Swaami shreepurandaravittalana |
Naamava nemadinda nee nene manave || 3 ||


https://youtu.be/FFVd2e7clhA

Leave a Reply