ಹ್ಯಾಂಗೆ ಮಾಡಲಯ್ಯಾ ಕೃಷ್ಣ / Hyaange maadalayya Krishna

ಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯ || ಪ ||

ಮಂಗಳಾಂಗ ಭವಭಂಗ ಬಿಡಿಸಿ
ನಿನ್ನ ಡಿಂಗರಿಗನ ಮಾಡೋ ಅನಂಗ ಜನಕ || ಅ.ಪ ||

ಏಸು ಜನುಮದ ಸುಕೃತದ ಫಲವೋ ತಾನು ಜನಿಸಲಾಗಿ
ಭೂಸುರ ದೇಹದ ಜನುಮವು ಎನಗೆ ಸಂಭವಿಸಿದೆಯಾಗಿ
ಮೋದತೀರ್ಥ ಮತ ಚಿಹ್ನಿತನಾಗದೆ ದೋಷಕೆ ಒಳಗಾಗಿ
ಲೇಶ ಸಾಧನವ ಕಾಣದೆ ದುಸ್ಸಹವಾಸದಿಂದಲೇ ದಿನದಿನ ಕಳೆದೆ || 1 ||

ಶಶಿಮುಖಿ ಕನಕದ ಆಸೆಗೆ ಬೆರೆತು ವಸುಪತಿ ನಿನ್ನಡಿಯ
ಹಸನಾಗಿ ನಿನ್ನ ನೆನೆಯದೆ ಕೃಪೆಯಗಳಿಸದೆ ಕೆಟ್ಟೆನಯ್ಯ
ನಿಶಿಹಗಲು ಸ್ಥಿರವೆಂದು ತನುವನು ಪೋಷಿಸಲಾಶಿಸಿ ಜೀಯ
ಉಸುರಿದೆ ನೆಲವೋ ಸರ್ವಕಾಲ ನಿನ್ನೊಡೆತನವೆಂಬುವ ಬಗೆಯನು ಅರಿಯದೆ || 2 ||

ನೆರೆನಂಬಿದ ಪಾವಟಿಗಳು ಎಲ್ಲಾ ಸರಿದು ಹೋದವಲ್ಲ
ಮರಳಿ ಈ ಪರಿ ಜನುಮವು ಬರುವ ಭರವಸೆಯಂತೂ ಇಲ್ಲ
ಪರಿಪರಿ ವಿಷಯದ ಆಸೆಯು ಯನಗೆ ಪಿರಿದು ಆಯಿತಲ್ಲ
ಹರಿಯೇ ಜಗದಿ ನೀನೊಬ್ಬನಲ್ಲದೆ ಪೊರೆವರಿನ್ನಾರು ಇಲ್ಲವಲ್ಲ || 3 ||

ಅವನಿಯೊಳಗೆ ಪುಣ್ಯಕ್ಷೇತ್ರ ಚರಿಸುವ ಹವಣಿಕೆ ಎನಗಿಲ್ಲ
ಪವನಾತ್ಮಕ ಗುರು ಮಧ್ವಶಾಸ್ತ್ರದ ಪ್ರವಚನ ಕೇಳಲಿಲ್ಲ
ತವಕದಿಂದ ಗುರುಹಿರಿಯರ ಸೇವಿಸಿ ಅವರ ಒಲಿಸಲಿಲ್ಲ
ರವಿನಂದನ ಕೇಳಿದರುತ್ತರ ಕೊಡೆ ವಿವರ ಸರಕು ಒಂದಾದರಿಲ್ಲ || 4 ||

ಭಾಗವತರೊಡಗೂಡಿ ಉಪವಾಸ ಜಾಗರ ಒಂದಿನ ಮಾಡಲಿಲ್ಲ
ರಾಗದಿ ಶುಕಮುನಿ ಪೇಳ್ದ ಹರಿಕಥೆ ಸಂಯೋಗವೆಂಬೋದಿಲ್ಲ
ನೀಗುವಂಥ ಭವಭಯವ ಭಕುತಿ ವೈರಾಗ್ಯವೆಂಬೋದಿಲ್ಲ
ಯೋಗಿವಂದ್ಯ ಗೋಪಾಲವಿಠ್ಠಲ ತಲೆಬಾಗಿ ನಿನ್ನನೇ ಬೇಡಿಕೊಂಬೆ || 5 ||

Lyrics In English

Composer : Sri Gopala dasaru

Hyaange maadalayya Krishna hogutide aayushya || pa ||

Mangalaanga bhava bhanga bidisi
ninna dingarigana maado ananga janaka || a.pa ||

Yesu janmada sukratada phalavo taanu janisalaagi
bhoosura dehada janumavu enage sambhavisideyaagi
Moda teertha matha chinhita naagade doshake olagaagi
lesha saadhanava kaanade dussaha vaasadindale dina dina kalede || 1 ||

Shashimukha kanakada aasege beretu vasupati ninnadiya
hasanaagi ninna neneyade krupeya galisade kettenayya
nishi hagalu stiravendu tanuvanu poshisalaashisi jeeya
usuride nelavo sarvakaala ninnodetanavembuva bageyanu ariyade || 2 ||

Nere nambida paavatigalu ella saridu hodavalla
marali ee pari janumavu baruva bharavaseyantu illa
pari pari vishayada aaseyu yanage piridu aayitalla
Hariye jagadi neenobba nallade porevarinnaaru illavayya || 3 ||

Avaniyolage punya kshetra charisuva havanike yanagilla
Pavanaatmaka guru Madhwa shaastrada pravachana kelalilla
tavakadinda guri hiriyara sevisi avara olisalilla
Ravi nandana kelidaruttara kode vivara saraku ondaadarilla || 4 ||

Bhaagavata rodagoodi upavaasa jaagara ondina maadalilla
raagadi Shuka muni pelda Harikathe samyogavembodilla
neegu vantha bhava bhayava bhakuti vairaagya vembodilla
yogi vandya Gopaala Vittala talebaagi ninnane bedi kombe || 5 ||

————————

Leave a Reply